ಮಂಗಳವಾರ, ಏಪ್ರಿಲ್ 21, 2026

ದೀಪಮಾಲೆ - ಟಕ್ಕರ್ ಬಾಪ


 ಪುಸ್ತಕದ ಶೀರ್ಷಿಕೆ : ದೀಪಮಾಲೆ

ಲೇಖಕರು : ಸಿದ್ದವನಹಳ್ಳಿ ಕೃಷ್ಣಶರ್ಮ

ದ್ವಿತೀಯ ಮುದ್ರಣ : 1943


ಈ ಪುಸ್ತಕದ ಮುಖಪುಟ ಲಭ್ಯವಿಲ್ಲ ಜೊತೆಗೆ ಟಕ್ಕರ್ ಪಾಪ ಕುರಿತ ಅಧ್ಯಾಯ ಈ ಪುಸ್ತಕದ ಒಂದು ದೀಪ ಮಾಲೆಯ ಪರಿಚಯವಷ್ಟೇ ಇಂತಹ ಹಲವರ ಪರಿಚಯವಿದೆ ಈ ದೀಪ ಮಾಲೆಯಲ್ಲಿ 


ಟಕ್ಕರ್ ಬಾಪ ಎಂಬ ಹೆಸರು ನಾವು ಸಾಮಾನ್ಯವಾಗಿ ವಾರದ ಸೇವಾ ಗ್ರಾಮದವರನ್ನು ಅಥವಾ ಅವರ ಜೀವನ ಚರಿತ್ರೆಯವರನ್ನು ಕುರಿತು ಓದುವಾಗ ಈ ಹೆಸರು ಕೇಳಿಯೇ ಇರುತ್ತೇವೆ ವರ್ಷವೆಂದರೂ ಅವರ ಉತ್ಸಾಹ ಮಾತ್ರ ಚಿರಯುವಕನಂತೆ ಇವರ ಹೆಸರು ಅಮೃತ ಲಾಲ್ ಟಕ್ಕರ್ ಮೊದಲು ಬೊಂಬಾಯಿಯಲ್ಲಿ ರೋಡ್ ಇಂಜಿನಿಯರಾಗಿ ಸಾಕಷ್ಟು ವರಮಾನ ತೆಗೆದುಕೊಳ್ಳುತ್ತಿದ್ದವರು ಅವರ ಜೀವನದ ಶೃತಿಗೆ ಆ ಕೆಲಸ ಹೋಗದೆ ಅದನ್ನು ಬಿಟ್ಟು ಪುಣೆಯ ಸರ್ವೆಂಟ್ ಆಫ್ ಇಂಡಿಯಾ ಸಂಘವನ್ನು ಸೇರಿದರು 30 ವರ್ಷದಿಂದಲೂ ಅವರ ತಪಸ್ಸು ಒಂದೇ ಸಮನಾಗಿ ದೇಶಕ್ಕಾಗಿ ಸಾಗುತ್ತಲೇ ಇದೆ ಬಾಪಾಗೆ ಕುಟುಂಬದ ಸಾಂಸಾರಿಕ ಬಂಧನ ಇರಲಿಲ್ಲ ಅವರ ಪತ್ನಿ ಒಂದು ಮಗುವನ್ನು ಹಡೆದು ಕಣ್ಣುಮುಚ್ಚಿದರು ಆ ಮಗುವು ಬಹಳ ದಿನ ಉಳಿಯಲಿಲ್ಲ ತಂದೆಯ ಬಲವಂತಕ್ಕಾಗಿ ಎರಡನೇ ಸಲ ಮದುವೆಯಾದರೂ ಆ ಸಾಂಸಾರಿಕ ಬಂದನವೂ ನಿಲ್ಲಲಿಲ್ಲ ಆಕೆಯು ಬೇಗನೆ ತೀರಿಕೊಂಡರು ಅದಾದ ನಂತರ ಅವರಿಗೆ ಸಂಸಾರ ಬೇಕೆನಿಸುತ್ತದೆ ನಾಡಿನ ದೀನದಲಿತರನ್ನೇ ತನ್ನವರನ್ನಾಗಿ ಮಾಡಿಕೊಂಡು ದೇಶವೇ ಒಂದು ಕುಟುಂಬ ಎಂದು ಬದುಕಿದವರು 


ವ್ಯಾಪಾರ ಕರ್ಮ ಜೀವನದಲ್ಲಿ ಬಹಳಷ್ಟು ಜನರಿಗೆ ಬಾಳಿನ ಹಾದಿ ತೋರಿದ್ದಾರೆ ತಮ್ಮ ಹಿತವಚನಗಳಿಂದ ಅನೇಕರಿಗೆ ಸೇವಾ ದೀಕ್ಷೆ ಕೊಟ್ಟಿದ್ದಾರೆ ತಾವು ಮುಂದಾಳುವಾಗಿ ದೇಶ ಸೇವಕರಾಗಿ ಎಷ್ಟೋ ಜನರಿಗೆ ಸ್ಪೂರ್ತಿಯಾಗಿದ್ದಾರೆ ಅವರ ಮಾತನ್ನು ಮೀರದವರು ಇದ್ದಾರೆ 


1921 ರಲ್ಲಿ ಬಿಲ್ಲರ ನಾಡಾದ ಪಂಚಮಹಾಲಾ ಪ್ರಾಂತ್ಯದಲ್ಲಿ ಸಿಡಿಲು ಬರ ಬಂತು ಜನ ಸಾಯುತ್ತಿದ್ದಾಗ ಕೂಳು ಬೊಂಬೈಗೆ ಮುಟ್ಟಿತು ಅಮೃತ ಲಾಲ ಟಕ್ಕರರು ಕರೆ ಕೇಳಿ ಅಲ್ಲಿಗೆ ಹೋದರೆ ಒಂದು ಗುಡಿಸಲಿನ ಯಜಮಾನ ಕರೆದು ಅವರ ಕಷ್ಟ ಸುಖವನ್ನು ತಿಳಿದುಕೊಂಡು ಬಾ ಹಂಬಲ ಇವರಿಗೆ ಆದರೆ ಹೆಣ್ಣು ಮಗಳು ಹೊರಗೆ ಬರಲಿಲ್ಲ ಅದಕ್ಕೆ ಕಾರಣ ಇವರು ಅಪರಿಚಿತರು ಅಥವಾ ಬೇರೆಯವರು ಎಂದಲ್ಲ ಬದಲಾಗಿ ಆ ಹೆಣ್ಣು ಮಗಳಿಗೆ ಉಡಲು ಒಂದು ಚಿಂದಿಯು ಇರಲಿಲ್ಲ ತಮ್ಮ ಕೈ ಚೀಲದೊಳಗಿದ್ದ ಪಂಚಗಳೆರಡನ್ನು ಕುಡಿಸೋಣವಳಗೆ ಹಾಕಿದರು ಅಲ್ಲಿಂದ ಅವರ ಪವಿತ್ರ ಜೀವನದ ಮಹಾ ಸಂಕಲ್ಪ ರೂಪಗೊಂಡಿತು ಅಲ್ಲಲ್ಲಿ ಆಶ್ರಮಗಳು ಶುರು ಮಾಡಿದರು ಅವು ಶಾಲೆಯ ಔಷಧಾಲಯಗಳಲ್ಲಿ ಕಂಡು ಬಂದವು ನಾಲ್ಕಾರು ವರ್ಷಗಳಲ್ಲಿ ಬಿಲ್ಲರಲ್ಲಿ ಜಾಗೃತಿ ಕಂಡು ಬಂತು ಬಾಪ ಈ ಅಡವಿ ಜನರ ಪಾಲಿನ ಭಾಗ್ಯ ದೇವತೆಯಾದರು ಅಲ್ಲಿನವರು ಬಾಪಾರನ್ನು ದೇವತೆಯೆಂದು ಕರೆದದ್ದು ಉತ್ಪ್ರೇಕ್ಷೆಯಲ್ಲ 


ಬಾ ಪಾರಿಕೆ ಹುಮ್ಮಸ್ಸಿರುವುದೇ ಅದರ ಜೀವನದಲ್ಲಿ ಪ್ರತಿ ಕ್ಷಣ ಕೆಲಸ ಮಾಡುವುದರಲ್ಲಿ ಅದೊಂದು ಬಗೆಯ ಕರ್ಮ ಜೀವನ ಸಂಬಳಕ್ಕಾಗಿ ದುಡಿಯುವವರೆಗೂ ಒಂದು ಬಿಡುವಿನ ದಿನ ಅಥವಾ ಕ್ಷಣವಿರಬಹುದು ಆದರೆ ಪಾಪ ಹಾಗಿರಲಿಲ್ಲ ವಾರ್ಧದಿಂದ ಸೇವಾ ಗ್ರಾಮಕ್ಕೆ ಗಾಂಧೀಜಿಯನ್ನು ನೋಡಲು ಹೋಗಬೇಕಾದ ಕಾಲುಗಾಡಿ ಹಿಡಿಯುತ್ತಿದ್ದಂತೆ ಹೆಚ್ಚು ಗಾಂಧೀಜಿಯು ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದಾಗ ಇನ್ನು ಎಷ್ಟು ಕೆಲಸ ಹಾಗೆ ಬಿದ್ದಿದೆ ನಾನು ಹೇಗೆ ವಿಶ್ರಾಂತಿ ತೆಗೆದುಕೊಳ್ಳಲಿ ಆ ಕೆಲಸ ಮಾಡುತ್ತಾ ಹೋಗುವುದರಲ್ಲಿ ನನಗೆ ವಿಶ್ರಾಂತಿಯ ಸುಖ ಸಿಗುತ್ತದೆ ಎನ್ನುವ ಅವರಿಗೆ ತಮ್ಮ ಕೆಲಸದಲ್ಲಿಯೇ ಆನಂದ ಉತ್ಸಾಹ ಹಾಗೆಂದು ಅದು ಹುಚ್ಚು ದುಡಿತವಲ್ಲ ಬದಲಾಗಿ ಅರ್ಥವಿರುವ ಕ್ರಮವಿರುವ ಇಂದಿನ ಕೆಲಸವನ್ನು ಹಿಂದೆ ಮುಗಿಸಿ ಬಿಡುವ ಸಂಕಲ್ಪದಂತಹ ಕೆಲಸ 


ಹಣದ ವಿಚಾರದಲ್ಲಿಯೂ ಬಾಪ ಲೆಕ್ಕದಲ್ಲಿ ಬಹಳ ಜಾಗರೂಕರು ಹರಿಜನರಿಗಾಗಿ ಶಾಲೆಗಳು ಭಂಗಿಗಳಿಗಾಗಿ ಸಹಕಾರ ಸಂಘಗಳು ಮೇಳಗಳು ಅವರ ಮೊದಲಿನ ಕಾರ್ಯಕ್ರಮ ನಂತರ ಈ ಕಾರ್ಯಕ್ರಮ ಗುರ್ಜರಾತಿನ ತಾಲೂಕು ತಾಲೂಕಿಗೆ ಹರಡಿತು ನೆರೆಯ ಹಾವಳಿ ಬರಗಾಲಗಳ ಪಿಡುಗು ಬಂದಾಗ ಹಿಂದೂಸ್ತಾನದ ಯಾವುದೇ ಮೂಲೆಯಾಗಲಿ ಪಾಪಾರೆ ಪ್ರಥಮ ಸೇವಕರು 


ಅಜಾತಶತ್ರು ವಂತಹ ವ್ಯಾಪಾರಿಗೂ ಸೆರೆಮನೆ ವಾಸ ತಪ್ಪಲಿಲ್ಲ 1930ರಲ್ಲಿ ದೇಶ ಸೇವಕರನ್ನು ನೆಮ್ಮದಿಯಾಗಿ ಇರ ಕೊಟ್ಟರೆ ಬಿಲ್ಲಿಂಗಡನ್ ರಾಜ್ಯ ನೀತಿಗೆ ಕಳಂಕವಲ್ಲವೇ ಎಂದು ಆರು ತಿಂಗಳು ಜೈಲಿಗೆ ಹಾಕಿದ್ದರು ಆದರೆ ಪಾಪ ಅಲ್ಲಿಯೂ ಅಲ್ಲಿನವರಿಗೆ ಆಪ್ತರಂತೆ ಹಿರಿಯಣ್ಣನಂತೆ ನಿಂತು ಈತ ವಚನ ಹೇಳುವುದರಲ್ಲಿ ತಪ್ಪು ನಡೆಗಳನ್ನು ತೋರುವುದರಲ್ಲಿ ಸಿದ್ಧಹಸ್ತರು ಹರಿಜನ ಸೇವಕ ಸಂಘದಲ್ಲಿ ಕೆಲಸಗಾರನಾಗಿ ಸೇರಿದರೆ ಸಾಕು ಪಾಪ ಕುಟುಂಬಕ್ಕೆ ದತ್ತ ಕಾ ಹೋದಂತೆ ಅವರ ಇಡೀ ಕ್ಷೇಮವನ್ನೇ ಪಾಪ ಹೊತ್ತುಕೊಳ್ಳುತ್ತಾರೆ ಎನ್ನುವ ಮಾತಿತ್ತು 


ಗಾಂಧಿಯವರ ಮುಂದೆ ಇಂತಹ ಮಹಾನ್ ವ್ಯಕ್ತಿತ್ವಗಳು ಸಹ ಮಂಕಾದವೇನು ಎನ್ನುವ ಭಾವ ಇಂತಹವರ ಕುರಿತಾಗಿ ಓದಿದಾಗ ಮೂಡುತ್ತದೆ ಕೆ ತಾವು ಯಾವುದೇ ಪ್ರತಿಫಲ ಬಯಸದೆ ಯಾವುದೇ ಪ್ರತಿಷ್ಠೆ ಅಥವಾ ಹೆಸರಿನ ಕೋಜಿಲ್ಲದೆ ಸುಮ್ಮನೆ ದೇಶ ಸೇವೆಯಲ್ಲಿ ತೊಡಗಿಸಿಕೊಂಡವರು ವಯಸ್ಸು ಅಡ್ಡಿಯಲ್ಲ ಎಂದು ತೋರಿಸಿದವರು ಸ್ವಾತಂತ್ರ್ಯ ಹೋರಾಟವೆಂದರೆ ಕೇವಲ ಚಳುವಳಿಯಲ್ಲ ದೇಶದ ಜನರ ಉದ್ಧಾರ ಹಾಗೂ ಅಂತಹ ಕಾರ್ಯವನ್ನು ಕೇವಲ ಸರ್ಕಾರ ಮಾತ್ರ ಅಲ್ಲ ನಾವು ಮಾಡಬಹುದು ಎನ್ನುತ್ತಾ ತಮ್ಮ ಸಂಸ್ಥೆಗಳನ್ನು ಇಡೀ ಗುಜರಾತಿನಲ್ಲಿ ಹರಡಲು ನಿಂತವರು ನಾವು ಈಗ ಗಾಂಧಿ ಮಾರ್ಗ ಎಂದು ಗುರುತಿಸುವ ಅಹಿಂಸೆಯ ಹಾದಿಯಲ್ಲಿ ನಡೆದ ಟಕ್ಕರ್ ಬಾಪಾ ತೆರೆಮರೆಯ ಹಾದಿಯ ಹೋರಾಟಗಾರರು ತಪ್ಪಾಗಲಾರದು 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ