ಸಂಭ್ರಮದ ಸಂಕ್ರಾಂತಿ
ಸಂಪ್ರೀತಿಯ ಹೊತ್ತು ತಂದು
ಸಂಬಂಧವ ಗಟ್ಟಿ ಮಾಡಿ..
ಸ್ವಸ್ಥ ಸ್ಪರ್ಧೆಯಿಂದ ಹರ್ಷಿಸಿ
ಸುಗ್ಗಿಯ ಸಂಭ್ರಮದಿ ಮಿಂದು
ಸ್ನೇಹದಿಂದ ಎಳ್ಳು-ಬೆಲ್ಲ ಹಂಚಿ
ಸವಿ ಪ್ರೀತಿಯ ಸುರಿಮಳೆಯಲಿ
ಸರಿದ ಸಮಯದ ಪರಿವೇ ಇರದೆ
ಸಡಗರದಿ ನಲಿಯುತಿರಲು
ಸೂರ್ಯಾಸ್ತದ ಸಮಯವಾಗಲು
ಸುದಿನದ ಮೆಲುಕು ಹಾಕಿ ನಿದ್ರಿಸಲು
ಸೂರ್ಯೋದಯ ಬರುವುದು
ಸೊಗಸಾದ ಬೆಳಗು ಕಾಯುತಿವುದು
ಸಂಕ್ರಮಣದ ಸುದಿನದಂತೆ
ಸರಿಯಲಿ ಪ್ರತಿ ಘಳಿಗೆಯೂ..
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ